ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (೧೦ ಮೇ ೧೯೪೦ - ೦೫ ಫೆಬ್ರವರಿ ೨೦೨೨) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡಿದ ತತ್ವಪದಕಾರ ಮತ್ತು ಪ್ರವಚನಕಾರಾಗಿದ್ದರು. ಇವರಿಗೆ ೨೦೧೮ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ. == ಬದುಕು == ಇವರ ತಂದೆ ಮಹಾಲಿಂಗಪುರದ ನಬಿಸಾಹೆಬ್ , ತಾಯಿ ಅಮೀನಾಬಿ. ಬಡತನದಿಂದಾಗಿ ಶಿಕ್ಷಣ ಮೂರನೇ ತರಗತಿಯವರೆಗೆ ಮಾತ್ರ ಕಲಿತರು. ನಂತರ ನೇಕಾರಿಕೆ ಕಲಿತು ಬದುಕು ಸಾಗಿಸತೊಡಗಿದರು. ಬಾಲ್ಯದಲ್ಲಿ ಮಸೀದಿಯಲ್ಲಿ ನಮಾಜು , ಕಲಿತು ಕುರಾನ್ ಅಧ್ಯಯನ ಮಾಡಿದರು. ಬೇರೆ ಧರ್ಮಗಳನ್ನು ತಿಳಿಯಬಯಸಿದರು. ಊರಿನ ಭಜನಾಸಂಘದಲ್ಲಿ ಪಾಲುಗೊಳ್ಳುವ ಮೂಲಕ ತತ್ವಪದ , ವಚನಗಳನ್ನು ಕಲಿತರು. ಪ್ರವಚನಗಳನ್ನು ಕೇಳಿದರು. ನಿಜಗುಣಯೋಗಿಗಳ ಶಾಸ್ತ್ರ , ಭಗವದ್ಗೀತೆಗಳ ಅಧ್ಯಯನ ಮಾಡಿದರು. ದೇವರು , ಧರ್ಮ ಬೇರೆ ಆದರೂ ಸತ್ಯ ಒಂದೇ ಎಂದು ಅರಿತರು. ೧೯೮೦ರಲ್ಲಿ ಪ್ರವಚನಗಳನ್ನು ಕೊಡಲು ಆರಂಬಿಸಿದರು == ಸಾಧನೆಗಳು == ಮಹಾತ್ಮ ಕಬೀರರಂತೆ ಇವರು ಜನರಲ್ಲಿ ಭಾವೈಕ್ಯತೆಯನ್ನು ಉಂಟು ಮಾಡುತ್ತಿದ್ದಾರೆ. ಇವರ ಭಜನೆ ತತ್ವಪದಗಳ ಸುರುಳಿಗಳು ಬಿಡುಗಡೆ ಆಗಿವೆ. 'ನಾವೆಲ್ಲಾ ಭಾರತೀಯರು' ಎಂಬುದು ಅವರ ಕವನ ಸಂಕಲನ. == ಪ್ರಶಸ್ತಿಗಳು == ೧೯೯೫ ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ. ೨೦೧೮ರಲ್ಲಿ ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ == ಇದನ್ನು ಸಹ ನೋಡಿ == 'ಶ್ರೀ ಇಬ್ರಾಹೀಮ ಸುತಾರ ವೆಬ್ ಸೈಟ್' == ಉಲ್ಲೇಖ ==